ನಾಗರೀಕ ಸನ್ನದು

ವಾಣಿಜ್ಯ ತೆರಿಗೆಗಳ ಇಲಾಖೆಯು ಕರ್ನಾಟಕ ಸರ್ಕಾರದ ಸಚಿವಾಲಯದ ಹಣಕಾಸು ಇಲಾಖೆಯ ಒಂದು ಮುಖ್ಯ ವಿಭಾಗವಾಗಿರುತ್ತದೆ. ವಾಣಿಜ್ಯ ತೆರಿಗೆಗಳ ಆಯುಕ್ತರು ವಾಣಿಜ್ಯ ತೆರಿಗೆಗಳ ಇಲಾಖೆಯ ರಾಜ್ಯ ಮಟ್ಟದ ಮುಖ್ಯಸ್ಥರಾಗಿರುತ್ತಾರೆ. ಸೇವೆಯನ್ನು ಒದಗಿಸುವ ಗುಣಮಟ್ಟವನ್ನು ಉತ್ತಮಪಡಿಸುವ ಸಲುವಾಗಿ ನಾಗರೀಕ ಸನ್ನದನ್ನು ಅಳವಡಿಸಿಕೊಂಡಿದೆ. ಈ ಸನ್ನದು ನಮ್ಮ ದೂರದೃಷ್ಟಿ, ಧ್ಯೇಯ, ಉದ್ದೇಶಗಳು, ಸೇವೆಯನ್ನು ಒದಗಿಸುವ ಮಾನದಂಡಗಳು, ತೆರಿಗೆ ಕಾರ್ಯನೀತಿಯನ್ನು ಅತ್ಯುತ್ತಮವಾಗಿ ಸಾಧಿಸಲು ಸಹಾಯಕವಾಗುತ್ತದೆ.

ಉದ್ದೇಶಗಳು:

ದೂರದೃಷ್ಟಿ ಮತ್ತು ಧ್ಯೇಯಗಳ ಮೂಲದಿಂದ ಪಡೆದ ಉದ್ಧೇಶಗಳು:

  • ಹೆಚ್ಚಿನ ರಾಜಸ್ವ ಸಂಗ್ರಹಣೆ.
  • ತೆರಿಗೆ ಸಂಗ್ರಹಣೆಯಲ್ಲಿನ ದಕ್ಷತೆಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸುವುದು.
  • ತೆರಿಗೆ ಅನುಸರಣೆಗಾಗಿ ಸೌಲಭ್ಯ ಕಲ್ಪಿಸುವುದು.
  • ಮಾಹಿತಿ ತಂತ್ರಾಜ್ಞಾನದ ಮೂಲಕ ತೆರಿಗೆ ಪಾವತಿದಾರರಿಗೆ ಪರಿಣಾಮಕಾರಿಯಾಗಿ ಸೇವೆಯನ್ನು ನೀಡುವುದು.

ನಮ್ಮ ಪ್ರಮುಖ ಕಾರ್ಯಗಳು

  • ಕೆಳಕಂಡ ಕಾಯ್ದೆಗಳಲ್ಲಿ ತೆರಿಗೆ ವಿಧಿಸುವ ಮತ್ತು ಸಂಗ್ರಹಿಸುವ ತೆರಿಗೆ ಆಡಳಿತ ನಿರ್ವಹಿಸುವುದು:
    • 2017ರ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ.
    • 1957ರ ಕರ್ನಾಟಕ ಮಾರಾಟ ತೆರಿಗೆ ಅಧಿನಿಯಮ.
    • 1976ರ ಕರ್ನಾಟಕ ವೃತ್ತಿಗಳು, ವ್ಯಾಪಾರಗಳು ಮತ್ತು ಉದ್ಯೋಗಗಳ ಮೇಲಣ ತೆರಿಗೆ ಅಧಿನಿಯಮ.
  • ಮೇಲೆ ಹೇಳಿರುವ ಮೂರು ಅಧಿನಿಯಮಗಳಲ್ಲಿ ವ್ಯಾಪಾರಿಗಳಿಗೆ ನೋಂದಣಿ ನೀಡುವ, ನೋಂದಣಿ ತಿದ್ದುಪಡಿ ಮಾಡುವ ಕಾರ್ಯ.
  • ತೆರಿಗೆ ಪಾವತಿದಾರರಿಂದ ರಿಟರ್ನಗಳು, ಹೇಳಿಕೆಗಳು ಮತ್ತು ಘೋಷಣೆಗಳ ಸ್ವೀಕೃತಿ.
  • ಸುಲಭವಾಗಿ ಮತ್ತು ಸರಳವಾಗಿ ಆನ್ ಲೈನ್ ಮೂಲಕ ತೆರಿಗೆ ಪಾವತಿ ಮಾಡಲು ಅನುವು ಮಾಡಿಕೊಡುವುದು.
  • ವೃತ್ತಿ ತೆರಿಗೆ ಮತ್ತು ಮಾರಾಟ ತೆರಿಗೆಯನ್ನು ಮಾತ್ರ ಅಧಿಸೂಚಿತ ಮೊತ್ತಕ್ಕಿಂತ ಕಡಿಮೆ ಬಾದ್ಯತೆ ಇರುವ ಕರದಾತರಿಂದ ನಗದು/ಚೆಕ್/ ಡಿಡಿ ಮೂಲಕ ಸ್ವೀಕರಿಸುವುದು. ಸ್ವೀಕೃತ ಉಪಕರಣವನ್ನು ನಗದೀಕರಣಗೊಳಿಸಿ ಹಣವನ್ನು ಖಜಾನೆಗೆ ಸಂದಾಯಮಾಡುವುದು.
  • ರಿಟರ್ನಗಳ, ಹೇಳಿಕೆಗಳ ಮತ್ತು ಘೋಷಣೆಗಳ ಸಲ್ಲಿಸದೆ ಇರುವ ಕರದಾತರ ನಿಗಾವಣೆ.
  • ರಿಟರ್ನಗಳ, ಹೇಳಿಕೆಗಳ ಮತ್ತು ಘೋಷಣೆಗಳ ಪರಿಶೀಲನೆ.
  • ಇ-ಆಡಳಿತದ ಮೂಲಕ ಸರಳೀಕೃತ ವಿಧಾನದ ಮೂಲಕ ಶಾಸನಬದ್ಧ ನಮೂನೆಗಳನ್ನು ನೀಡುವುದು.
  • ಸರಿಯಾದ ತೆರಿಗೆ ಅನುಸರಣೆಗಾಗಿ ಆಯ್ದ ವ್ಯಾಪಾರಿಗಳ ಲೆಕ್ಕಪತ್ರ ಪರಿಶೋಧನೆ.
  • ತೆರಿಗೆ ವಂಚನೆಯನ್ನು ಪತ್ತೆ ಹಚ್ಚುವುದು ಹಾಗೂ ಪ್ರತಿಬಂಧಿಸುವುದು.
  • ವ್ಯಾಪಾರಿಗಳಿಗೆ ಸರಕುಗಳನ್ನು ಸುಲಭದಲ್ಲಿ ಮತ್ತು ವಿಳಂಬವಿಲ್ಲದೆ ಸಾಗಾಣಿಕೆ ಮಾಡುವ ಸೌಲಭ್ಯ ಒದಗಿಸುವುದು.

ಒದಗಿಸುತ್ತಿರುವ ಸೇವೆಗಳು

  • ತೆರಿಗೆ ನಿಯಮಗಳಲ್ಲಾಗುವ ಬದಲಾವಣೆಗಳು ಮತ್ತು ವಿಧಿ ವಿಧಾನಗಳನ್ನು ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮದ ಮೂಲಕ; ಸಂವಹನ ಸಭೆ, ಚರ್ಚೆ, ತರಬೇತಿ ಮೂಲಕ ಪ್ರಚುರ ಪಡಿಸುವುದು ಮತ್ತು ಸಾಮರ್ಥ್ಯ ಹೆಚ್ಚಿಸುವುದು.
  • ನೋಂದಣಿ ಹಾಗೂ ನೋಂದಣಿಯ ನಂತರದ ಬದಲಾವಣೆಗಳನ್ನು ಆನ್ ಲೈನ್ ಮೂಲಕ ಒದಗಿಸುವುದು.
  • ರಿಟರ್ನಗಳನ್ನು ಸಲ್ಲಿಸಲು ವಿವರಗಳನ್ನು ಮತ್ತು ರಿಟರ್ನಗಳನ್ನು ಆನ್ ಲೈನ್ ಮೂಲಕ ಸಲ್ಲಿಸುವ ಸೌಲಭ್ಯ ಒದಗಿಸುವುದು.
  • ಆನ್ ಲೈನ್ ತೆರಿಗೆ ಪಾವತಿಯ ಸೌಲಭ್ಯ ಒದಗಿಸುವುದು.
  • ವೃತ್ತಿ ತೆರಿಗೆ ಮತ್ತು ಮಾರಾಟ ತೆರಿಗೆಯನ್ನು ಮಾತ್ರ ನಿಗದಿತ ಮೊತ್ತಕ್ಕಿಂತ ಕಡಿಮೆ ಬಾದ್ಯತೆ ಇರುವ ಕರದಾತರಿಂದ ನಗದು/ಚೆಕ್/ ಡಿಡಿ ಮೂಲಕ ಸ್ವೀಕರಿಸುವುದು. ಸ್ವೀಕೃತ ಉಪಕರಣವನ್ನು ನಗದೀಕರಣಗೊಳಿಸಿ ಹಣವನ್ನು ಖಜಾನೆಗೆ ಸಂದಾಯಮಾಡುವುದು.
  • ಕೇಂದ್ರ ಮಾರಾಟ ತೆರಿಗೆ ನಮೂನೆಗಳಿಗಾಗಿ ಆನ್ ಲೈನ್ ಮೂಲಕ ಕೋರಿಕೆ ಸಲ್ಲಿಸುವ ಹಾಗೂ ನೀಡುವ ಸೌಲಭ್ಯ.
  • ಕೇಂದ್ರ ಮಾರಾಟ ತೆರಿಗೆ ನಮೂನೆಗಳ ಸತ್ಯಾಸತ್ಯತೆಯನ್ನು ಆನ್ ಲೈನ್ ನಲ್ಲಿ ಪರಿಶೀಲನೆ.
  • ಆನ್ ಲೈನ್ ನಲ್ಲಿ ಕುಂದು ಕೊರತೆಗಳಿಗೆ ಪರಿಹಾರ.
  • ಆನ್ ಲೈನ್ ನಲ್ಲಿ ತೀರುವಳಿ ಪತ್ರಕ್ಕಾಗಿ ಕೋರಿಕೆ ಮತ್ತು ವಿತರಣೆ.
  • ಸರಕು ಸಾಗಾಣಿಕಾಗಿ ಇ-ವೇ ಬಿಲ್ಲುಗಳನ್ನು ಮೊಬೈಲ್ ನಲ್ಲಿ ಕೋರಿಕೆ ಮತ್ತು ಪಡೆದುಕೊಡುವುದು.
  • ಮೊಬೈಲ್ ಸೇವೆಗಳು – ಇ-ವೇ ಬಿಲ್ಲುಗಳನ್ನು ಮೊಬೈಲ್ ಮೂಲಕ ಕೋರಿಕೆ ಮತ್ತು ಪಡೆದುಕೊಳ್ಳುವುದು ಮತ್ತು ವಿವಿಧ ಮಾಹಿತಿ ಎಚ್ಚರಿಕೆ ಸಂದೇಶ ಒದಗಿಸುವುದು.
  • ಸಾರ್ವಜನಿಕರು, ವ್ಯಾಪಾರಿಗಳ ವಿರುದ್ಧ ಎಸ್.ಎಂ.ಎಸ್. ಮೂಲಕ ಮಾಹಿತಿ/ದೂರು ನೀಡುವ ಸೌಲಭ್ಯ ಮತ್ತು ಮುಂದುವರೆದ ಕ್ರಮ ಜರುಗಿಸುವುದು.

ನಮ್ಮ ಮಾನದಂಡಗಳು

ಇಲಾಖೆಯು ಸಂಪೂರ್ಣವಾಗಿ ಇ-ಆಡಳಿತ ಅಳವಡಿಸಿಕೊಳ್ಳುವ ಮೂಲಕ ತೆರಿಗೆ ಪಾವತಿದಾರರಿಗೆ ಸೇವೆಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಬದ್ಧತೆಯನ್ನು ಹೊಂದಿದ್ದು, ಇದರಿಂದಾಗಿ ತೆರಿಗೆ ಸಂಗ್ರಹಣೆಯಲ್ಲಿ ದಕ್ಷತೆ, ತೆರಿಗೆ ಅನುಸರಣೆ, ತೆರಿಗೆ ಪಾವತಿದಾರರ ಮತ್ತು ಸಾರ್ವಜನಿಕರ ದೂರುಗಳ ಪರಿಹಾರ ಮತ್ತು ನಿಗಾ ವಹಿಸುವ ವ್ಯವಸ್ಥೆ ಸೃಷ್ಟಿಸುವುದು ನಮ್ಮ ಪ್ರಮುಖ ಮಾನದಂಡಗಳಾಗಿವೆ.

ಸೇವೆಗಳನ್ನು ಒದಗಿಸುವ ಬಗ್ಗೆ ನಮ್ಮ ಬದ್ಧತೆಗಳು ಕೆಳಕಂಡಂತಿವೆ:-

  • 2017ರ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮದ ಅಡಿಯಲ್ಲಿ ನೋಂದಣಿಗಾಗಿ ಅರ್ಜಿ ಸಲ್ಲಿಸಿದ ದಿನದಿಂದ 3 ಕೆಲಸದ ದಿನಗಳ ಒಳಗಾಗಿ ನೋಂದಣಿ ನೀಡುವುದು.
  • 1956ರ ಕೇಂದ್ರ ಮಾರಾಟ ತೆರಿಗೆ ಕಾಯ್ದೆ ಅಡಿಯಲ್ಲಿ ‘ಸಿ’ ನಮೂನೆಗಾಗಿ ಅರ್ಜಿ ಸಲ್ಲಿಸಿದ ದಿನದಂದೇ (ಸ್ವಯಂ ಚಾಲಿತ ವ್ಯವಸ್ಥೆಯಿಂದ) ‘ಸಿ’-ನಮೂನೆ ನೀಡುವುದು.
  • 1956ರ ಕೇಂದ್ರ ಮಾರಾಟ ತೆರಿಗೆ ಕಾಯ್ದೆ ಅಡಿಯಲ್ಲಿ ‘ಎಫ್’ ನಮೂನೆಗಾಗಿ ಅರ್ಜಿ ಸಲ್ಲಿಸಿದ ದಿನದಿಂದ 10 ಕೆಲಸದ ದಿನಗಳ ಒಳಗಾಗಿ ‘ಎಫ್’ ನಮೂನೆ ನೀಡುವುದು.
  • 1976ರ ಕರ್ನಾಟಕ ವೃತ್ತಿಗಳು, ವ್ಯಾಪಾರಿಗಳು ಮತ್ತು ಉದ್ಯೋಗಗಳ ಮೇಲಣ ತೆರಿಗೆ ಕಾಯ್ದೆ ಅಡಿಯಲ್ಲಿ ನೋಂದಣಿಗಾಗಿ ಅರ್ಜಿ ಸಲ್ಲಿಸಿದ ದಿನವೇ ನೋಂದಣಿ ನೀಡುವುದು.

ನಮ್ಮ ನಿರೀಕ್ಷೆಗಳು

  • ಎಲ್ಲಾ ಕಾಯ್ದೆಗಳ ಉಪಬಂಧಗಳನ್ನು ಅನುಸರಿಸುವುದು.
  • ರಿಟರ್ನಗಳನ್ನು ಮತ್ತು ತೆರಿಗೆ ಪಾವತಿಯನ್ನು ಸಮಯಬದ್ಧವಾಗಿ ಸಲ್ಲಿಸುವುದು.
  • ಶೀಘ್ರವಾಗಿ ಮಾಹಿತಿಯನ್ನು ಒದಗಿಸುವುದು.
  • ತಮ್ಮ ಕರ್ತವ್ಯಗಳನ್ನು ಹಾಗೂ ಕಾನೂನು ಬಾಧ್ಯತೆಗಳನ್ನು ಸಮಯಬದ್ಧವಾಗಿ ಪಾಲಿಸುವುದು.
  • ಅನಗತ್ಯ ವ್ಯಾಜ್ಯಗಳನ್ನು ತಪ್ಪಿಸುವುದು.
  • ಲೆಕ್ಕ ಪರಿಶೋಧನೆ ಹಾಗೂ ಅಡ್ಡ ಪರಿಶೀಲನೆ ಕಾರ್ಯಗಳಲ್ಲಿ ಸಹಕರಿಸುವುದು ಮತ್ತು ಸ್ಪಂದಿಸುವುದು. ನೋಂದಣಿಯ ವಿವರಗಳಲ್ಲಾಗುವ; ವ್ಯಾಪಾರ ಸ್ಥಳ ವಿಳಾಸದ ಬದಲಾವಣೆ, ಸಂಪರ್ಕ ಸಂಖ್ಯೆ, ಇ-ಮೇಲ್ ವಿಳಾಸ ಇವುಗಳ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಮಾಹಿತಿ ನೀಡುವುದು. ಇದರಿಂದಾಗಿ ಸೇವೆಗಳನ್ನು ಹೆಚ್ಚಿನ ದಕ್ಷತೆ ಮತ್ತು ಪರಿಣಾಮಕಾರಿಯಾಗಿ ಒದಗಿಸಲು ಸಾಧ್ಯವಾಗುತ್ತದೆ.

ಎಸ್.ಎಂ.ಎಸ್. ಮೂಲಕ ವ್ಯಾಪಾರಿಗಳ ವಿರುದ್ಧ ದೂರು

ಯಾವುದೇ ವ್ಯಾಪಾರಿಯು ಮಾರಾಟ ಮಾಡಿದ ಸರಕಿಗೆ ಮಾರಾಟ ಬಿಲ್ ನೀಡದಿದ್ದಲ್ಲಿ ಅಥವಾ ತೆರಿಗೆ ತಪ್ಪಿಸುವಿಕೆಯ ಘಟನೆಗಳ ಬಗ್ಗೆ ಸಾಮಾನ್ಯ ನಾಗರೀಕರು ಮಾಹಿತಿಯನ್ನು ಎಸ್.ಎಂ.ಎಸ್. ಮೂಲಕ ಒದಗಿಸಲು ಒಂದು ವ್ಯವಸ್ಥೆಯನ್ನು ಯುಕ್ತ ಸ್ಥಳದಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ರೀತಿ ನೀಡಿದ ದೂರುಗಳ ಸ್ಥಿತಿಗತಿಯನ್ನು ಜಾಲತಾಣ ವಿಳಾಸ: http://gst.kar.nic.in ನಲ್ಲಿನ ನೋಡಬಹುದಾಗಿರುತ್ತದೆ. ಈ ಸೌಲಭ್ಯವನ್ನು ‘ಇ-ಗ್ರಾಹಕ್’ ಎಂದು ಕರೆಯಲಾಗುತ್ತಿದೆ.

ಸರಕು ಮತ್ತು ಸೇವೆಗಳ ತೆರಿಗೆಗೆ ಸಂಬಂಧಪಟ್ಟ ಕುಂದುಕೊರತೆ ಮತ್ತು ತೊಂದರೆಗಳ ನಿವಾರಣೆಗಾಗಿ ಈ ಕೆಳಕಂಡ ಅಧಿಕಾರಿಗಳನ್ನು ಸಂಪರ್ಕಿಸಬಹುದು:

ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು (ಸಹಾಯಪೀಠ)
“ವಾಣಿಜ್ಯ ತೆರಿಗೆ ಕಾರ್ಯಾಲಯ”
ನೆಲಮಹಡಿ, 1ನೇ ಮುಖ್ಯರಸ್ತೆ, ಗಾಂಧಿನಗರ,
ಬೆಂಗಳೂರು-560009,
ದೂರವಾಣಿ ಸಂಖ್ಯೆ: 080-22265101/10 ext-129
ಸುಂಕರಹಿತ: 1800-425-6300
(ನೇರ): 080-22208401
e-mail: ctd.gsthelpdesk[dot]ka[dot]gov[dot]in

ಇನ್ನಿತರ ಸಾಮಾನ್ಯ ಕುಂದುಕೊರತೆ, ದೂರುಗಳನ್ನು ಈ ಕೆಳಕಂಡ ಅಧಿಕಾರಿಗಳಿಗೆ ಕಳುಹಿಸಬಹುದಾಗಿದೆ.

ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು (ಸಾರ್ವಜನಿಕ ಸಂಪರ್ಕಾಧಿಕಾರಿ)
"ವಾಣಿಜ್ಯ ತೆರಿಗೆ ಕಾರ್ಯಾಲಯ"
ನೆಲಮಹಡಿ, 1ನೇ ಮುಖ್ಯರಸ್ತೆ, ಗಾಂಧಿನಗರ,
ಬೆಂಗಳೂರು-560009
ದೂರವಾಣಿ ಸಂಖ್ಯೆ: (ನೇರ):080-22267245
e-mail: pro[dot]bng-kar[at]nic[dot]in ಅಥವಾ ctd.kar[at]ctd[dot]ka[dot]gov[dot]in

ವಿದ್ಯುನ್ಮಾನ ವ್ಯವಸ್ಥೆಗಳ ಕುರಿತಾದ ದೂರುಗಳನ್ನು ಮತ್ತು ಕುಂದುಕೊರತೆಗಳನ್ನು ctd.gsthelpdesk@ka.gov.in ಈ ಮಿಂಚಂಚೆ ವಿಳಾಸಕ್ಕೆ ಸಲ್ಲಿಸಬಹುದಾಗಿದೆ.

ಕ್ಷೇತ್ರೀಯ ಅಧಿಕಾರಿಗಳಿಗೆ ಸಲ್ಲಿಸಿದ ದೂರುಗಳಿಗೆ ಮತ್ತು ಕುಂದು ಕೊರತೆಗಳಿಗೆ ಯುಕ್ತ ಸಮಯದಲ್ಲಿ ಪರಿಹಾರ ಸಿಗದಿದ್ದಲ್ಲಿ ಸಂಬಂಧಿತ ಸರಕು ಮತ್ತು ಸೇವಾ ತೆರಿಗೆ ವಿಭಾಗದ ಸರಕು ಮತ್ತು ಸೇವಾ ತೆರಿಗೆ ತೆರಿಗೆಗಳ ಜಂಟಿ ಆಯುಕ್ತರುಗಳನ್ನು ಸಂಪರ್ಕಿಸಬಹುದಾಗಿದೆ.ವಿವರಗಳು ಕೆಳಕಂಡಂತಿವೆ


ಕ್ರಮ ಸಂ. ವಿಭಾಗಗಳು ಹೆಸರು ಮತ್ತು ವಿಳಾಸ ದೂರವಾಣಿ/ ಮೊಬೈಲ್ ಇ-ಮೇಲ್ ಐಡಿ
01 ಸರಕು ಮತ್ತು ಸೇವೆಗಳ ತೆರಿಗೆ ಜಂಟಿ ಆಯುಕ್ತರು (ಆಡಳಿತ), ವಿಭಾಗೀಯ ಸರಕು ಮತ್ತು ಸೇವೆಗಳ ತೆರಿಗೆ ಕಛೇರಿ-1. ಬೆಂಗಳೂರು. ನಾಗಪ್ರಕಾಶ್ ಎನ್
ಟಿ.ಟಿ.ಎಂ.ಸಿ, ಬಿ.ಎಂ.ಟಿ.ಸಿ ಕಟ್ಟಡ, 5ನೇ ಮಹಡಿ, ಯಶವಂತಪುರ, ಬೆಂಗಳೂರು - 560022.
080- 23570126, 080-3570382(ಫ್ಯಾಕ್ಸ್) jcctdgsto1.bng[at]ctd[dot]ka[dot]gov[dot]in
02 ಸರಕು ಮತ್ತು ಸೇವೆಗಳ ತೆರಿಗೆ ಜಂಟಿ ಆಯುಕ್ತರು (ಆಡಳಿತ), ವಿಭಾಗೀಯ ಸರಕು ಮತ್ತು ಸೇವೆಗಳ ತೆರಿಗೆ ಕಛೇರಿ-2, ಬೆಂಗಳೂರು. ಶಿವಕುಮಾರ್ ಎಸ್ ಇಟಗಿ
ನಂ.642, 2ನೇ ಮಹಡಿ, ಪಯೋನೀರ್ ಪ್ಲಾಜಾ, ಕೆಂಚೇನಹಳ್ಳಿ ಮುಖ್ಯ ರಸ್ತೆ, ರಾಜರಾಜೇಶ್ವರಿ ನಗರ, ಬೆಂಗಳೂರು-560 098.
080 26994401(ನೇರ), 080 26994402 (ಪಿ.ಎ.), 080 26994403(ಫ್ಯಾಕ್ಸ್) jcctdgsto2.bng[at]ctd[dot]ka[dot]gov[dot]in
03 ಸರಕು ಮತ್ತು ಸೇವೆಗಳ ತೆರಿಗೆ ಜಂಟಿ ಆಯುಕ್ತರು (ಆಡಳಿತ), ವಿಭಾಗೀಯ ಸರಕು ಮತ್ತು ಸೇವೆಗಳ ತೆರಿಗೆ ಕಛೇರಿ-3. ಬೆಂಗಳೂರು. ಸುಶೀಲ ಐ ಸಿ
ಟಿ.ಟಿ.ಎಂ.ಸಿ, ಬಿ.ಎಂ.ಟಿ.ಸಿ ಕಟ್ಟಡ, 5ನೇ ಮಹಡಿ, ಶಾಂತಿನಗರ, ಬೆಂಗಳೂರು- 560027.
080-22221048, 080-22221184(ಫ್ಯಾಕ್ಸ್) jcctdgsto3.bng[at]ctd[dot]ka[dot]gov[dot]in
04 ಸರಕು ಮತ್ತು ಸೇವೆಗಳ ತೆರಿಗೆ ಜಂಟಿ ಆಯುಕ್ತರು (ಆಡಳಿತ), ವಿಭಾಗೀಯ ಸರಕು ಮತ್ತು ಸೇವೆಗಳ ತೆರಿಗೆ ಕಛೇರಿ-4, ಬೆಂಗಳೂರು. ರಾಜೀವ್ ಎಸ್ ಇ
ವಿ.ಟಿ.ಕೆ-2, ‘ಬಿ’ ಬ್ಲಾಕ್, 6ನೇ ಮಹಡಿ, 80 ಅಡಿ ರಸ್ತೆ, ರಾಜೇಂದ್ರನಗರ, ಕೋರಮಂಗಲ, ಬೆಂಗಳೂರು- 560047.
080-25704770, 080-25704833(ಪಿ.ಎ)
080-25703822(ಫ್ಯಾಕ್ಸ್)
jcctdgsto4.bng[at]ctd[dot]ka[dot]gov[dot]in
05 ಸರಕು ಮತ್ತು ಸೇವೆಗಳ ತೆರಿಗೆ ಜಂಟಿ ಆಯುಕ್ತರು (ಆಡಳಿತ), ವಿಭಾಗೀಯ ಸರಕು ಮತ್ತು ಸೇವೆಗಳ ತೆರಿಗೆ ಕಛೇರಿ-5, ಬೆಂಗಳೂರು ರಂಗನಾಥ ಎಸ್ ಓ
ವಿ.ಟಿ.ಕೆ-2, ‘ಬಿ’ ಬ್ಲಾಕ್, 6ನೇ ಮಹಡಿ, 80 ಅಡಿ ರಸ್ತೆ, ರಾಜೇಂದ್ರನಗರ, ಕೋರಮಂಗಲ, ಬೆಂಗಳೂರು- 560047.
080-25706157, 080-25706175(ಫ್ಯಾಕ್ಸ್) jcctdgsto5.bng[at]ctd[dot]ka[dot]gov[dot]in
06 ಸರಕು ಮತ್ತು ಸೇವೆಗಳ ತೆರಿಗೆ ಜಂಟಿ ಆಯುಕ್ತರು (ಆಡಳಿತ), ವಿಭಾಗೀಯ ಸರಕು ಮತ್ತು ಸೇವೆಗಳ ತೆರಿಗೆ ಕಛೇರಿ-6, ಬೆಂಗಳೂರು. ನಾಗರಾಜು ಬಿ ಎಂ
3ನೇ ಮಹಡಿ, ಕೆ.ಎ.ಐಡಿ.ಬಿ ಕಟ್ಟಡ, 14ನೇ ಕ್ರಾಸ್, ಪೀಣ್ಯ 2ನೇ ಸ್ಟೇಜ್, ಬೆಂಗಳೂರು- 560058.
080-28363927, 080-28363845(ಫ್ಯಾಕ್ಸ್) jcctdgsto6.bng[at]ctd[dot]ka[dot]gov[dot]in
07 ಸರಕು ಮತ್ತು ಸೇವೆಗಳ ತೆರಿಗೆ ಜಂಟಿ ಆಯುಕ್ತರು (ಆಡಳಿತ), ವಿಭಾಗೀಯ ಸರಕು ಮತ್ತು ಸೇವೆಗಳ ತೆರಿಗೆ ಕಛೇರಿ, ಮೈಸೂರು. ಸವಿತ ಎಂ
ಶೇಷಾದ್ರಿ ಭವನ, ದಿವಾನ ರಸ್ತೆ, ಕೆ.ಆರ್. ಮೊಹಲ್ಲಾ, ಮೈಸೂರು-570024.
0821-2426652, 0821-2420367
0821-2421877
jcctdgsto.mys[at]ctd[dot]ka[dot]gov[dot]in
08 ಸರಕು ಮತ್ತು ಸೇವೆಗಳ ತೆರಿಗೆ ಜಂಟಿ ಆಯುಕ್ತರು (ಆಡಳಿತ), ವಿಭಾಗೀಯ ಸರಕು ಮತ್ತು ಸೇವೆಗಳ ತೆರಿಗೆ ಕಛೇರಿ, ಶಿವಮೊಗ್ಗ. ತೇಜಸ್ವಿನಿ ಎಸ್
ಸುವರ್ಣ ಕರ್ನಾಟಕ ವಾಣಿಜ್ಯ ತೆರಿಗೆ ಭವನ, 60 ಅಡಿ ರಸ್ತೆ ಹತ್ತಿರ, ಗೋಪಾಲಗೌಡ ಬಡಾವಣೆ, ಶಿವಮೊಗ್ಗ- 577205.
08182-258706, 08182-258705(ಫ್ಯಾಕ್ಸ್)
08182-258707(ಪಿ.ಎ.)
jcctdgsto.smg[at]ctd[dot]ka[dot]gov[dot]in
09 ಸರಕು ಮತ್ತು ಸೇವೆಗಳ ತೆರಿಗೆ ಜಂಟಿ ಆಯುಕ್ತರು (ಆಡಳಿತ), ವಿಭಾಗೀಯ ಸರಕು ಮತ್ತು ಸೇವೆಗಳ ತೆರಿಗೆ ಕಛೇರಿ, ಮಂಗಳೂರು. ಮೀರಾ ಸುರೇಶ್ ಪಂಡಿತ್
ವಾಣಿಜ್ಯ ತೆರಿಗೆ ಭವನ, ಮೈದಾನ ರಸ್ತೆ, ಮಂಗಳೂರು-575001.
0824-2424147, 0824-2425581(ಫ್ಯಾಕ್ಸ್) jcctdgsto.mng[at]ctd[dot]ka[dot]gov[dot]in
10 ಸರಕು ಮತ್ತು ಸೇವೆಗಳ ತೆರಿಗೆ ಜಂಟಿ ಆಯುಕ್ತರು (ಆಡಳಿತ), ವಿಭಾಗೀಯ ಸರಕು ಮತ್ತು ಸೇವೆಗಳ ತೆರಿಗೆ ಕಛೇರಿ, ಧಾರವಾಡ. ನಾಗರಾಜ್ ರಾವ್ ಬಿ
ವಾಣಿಜ್ಯ ತೆರಿಗೆ ಭವನ, ಡಿ.ಸಿ. ಕಾಂಪೌಂಡ್, ಧಾರವಾಡ- 580001.
0836-2210170, 0836-2210172(ಫ್ಯಾಕ್ಸ್)
0836-2210173
jcctdgsto.dwd[at]ctd[dot]ka[dot]gov[dot]in
11 ಸರಕು ಮತ್ತು ಸೇವೆಗಳ ತೆರಿಗೆ ಜಂಟಿ ಆಯುಕ್ತರು (ಆಡಳಿತ), ವಿಭಾಗೀಯ ಸರಕು ಮತ್ತು ಸೇವೆಗಳ ತೆರಿಗೆ ಕಛೇರಿ, ಬೆಳಗಾವಿ. ಯಾಸ್ಮಿನ್ ಬೇಗಂ ವಾಲೀಕರ್
ಸುಮೌಲ್ಯ ಸೌಧ, ಕ್ಲಬ್ ರಸ್ತೆ, ಬೆಳಗಾವಿ- 59001.
0831-2470363, 0831-2470365(ಫ್ಯಾಕ್ಸ್)
0831-2407366(ಪಿ.ಎ)
jcctdgsto.blgm[at]ctd[dot]ka[dot]gov[dot]in
12 ಸರಕು ಮತ್ತು ಸೇವೆಗಳ ತೆರಿಗೆ ಜಂಟಿ ಆಯುಕ್ತರು (ಆಡಳಿತ), ವಿಭಾಗೀಯ ಸರಕು ಮತ್ತು ಸೇವೆಗಳ ತೆರಿಗೆ ಕಛೇರಿ, ಕಲಬುರಗಿ. ಬಾಲಸ್ವಾಮಿ ಟಿ
ವಾಣಿಜ್ಯ ತೆರಿಗೆ ಕಾರ್ಯಾಲಯ, 1 ನೇ ಮಹಡಿ, ರೈಲ್ವೇ ಸ್ಟೇಷನ್ ಹತ್ತಿರ, ಕಲಬುರಗಿ- 585101.
08472-221338, 08472-222051(ಫ್ಯಾಕ್ಸ್) jc.ctdgstoklgb[at]ctd[dot]ka[dot]gov[dot]in
13 ಸರಕು ಮತ್ತು ಸೇವೆಗಳ ತೆರಿಗೆ ಜಂಟಿ ಆಯುಕ್ತರು (ಆಡಳಿತ), ವಿಭಾಗೀಯ ಸರಕು ಮತ್ತು ಸೇವೆಗಳ ತೆರಿಗೆ ಕಛೇರಿ, ದಾವಣಗೆರೆ ಮತ್ತು ಬಳ್ಳಾರಿ. ಮಹಂತೇಶ್ ಎಸ್
ವಾಣಿಜ್ಯ ತೆರಿಗೆ ಭವನ, ‘ಎ’ ಬ್ಲಾಕ್, ದೇವರಾಜ ಅರಸು ಬಡಾವಣೆ, ದಾವಣಗೆರೆ- 577002.
08192-253415, 08192-231359
08192-254059
jcctdgsto.dvg[at]ctd[dot]ka[dot]gov[dot]in
14 ಸರಕು ಮತ್ತು ಸೇವೆಗಳ ತೆರಿಗೆ ಜಂಟಿ ಆಯುಕ್ತರು (ಕಿರಿಯ ಕಾಯ್ದೆಗಳು) ಸೋನಾಲ ಜಿ ನಾಯಕ್
ಟಿ.ಟಿ.ಎಂ.ಸಿ, ಬಿ.ಎಂ.ಟಿ.ಸಿ ಕಟ್ಟಡ, 4ನೇ ಮಹಡಿ, ಯಶವಂತಪುರ, ಬೆಂಗಳೂರು- 560022.
080-23470479, 080-23477611(ಫ್ಯಾಕ್ಸ್) jcctminoract.bng[at]ctd[dot]ka[dot]gov[dot]in