ಜಿಎಸ್‍ಟಿ ಕ್ಯಾಲೆಂಡರ್

ಜಿಎಸ್‍ಟಿ ರಿಟರ್ನ್ ಸಲ್ಲಿಸಲು ಗಡುವು ದಿನಾಂಕಗಳು
ಕ್ರಮ ಸಂಖ್ಯೆ ರಿಟರ್ನ್ ನಮೂನ ವೀಕ್ಷಿಸಿ ವಿವರಣೆ ಆವೃತ್ತಿ ಗಡುವು ದಿನಾಂಕ
1 ಜಿಎಸ್‍ಟಿಆರ್ -1 ಸರಕು ಅಥವಾ ಸೇವೆಗಳ ಹೊರಮುಖ ಪೂರೈಕೆಯ ವಿವರಗಳು ಮಾಸಿಕ ನಂತರದ ತಿಂಗಳ 11ನೇ ದಿನ
2 ಜಿಎಸ್‍ಟಿಆರ್ -3ಬಿ ಜಿಎಸ್‍ಟಿಆರ್-3 ಬದಲಿಗೆ ಮಾಸಿಕ ರಿಟರ್ನ್ ಮಾಸಿಕ ನಂತರದ ತಿಂಗಳ 20ನೇ ದಿನ
3 ಜಿಎಸ್‍ಟಿಆರ್ -4 ರಾಜೀ ಪದ್ಧತಿಯನ್ನು ಆಯ್ಕೆ ಮಾಡಿಕೊಂಡ ನೋಂದಾಯಿತ ವ್ಯಕ್ತಿಗಾಗಿ ತ್ರೈಮಾಸಿಕ ರಿಟರ್ನ್ ತ್ರೈಮಾಸಿಕ ತ್ರೈಮಾಸಿಕದ ತದನಂತರದ ತಿಂಗಳ 18ನೇ ದಿನ
4 ಜಿಎಸ್‍ಟಿಆರ್ -5 ಅನಿವಾಸಿ ತೆರಿಗೆದಾಯಕ ವ್ಯಕ್ತಿಗಾಗಿ ರಿಟರ್ನ್ ಮಾಸಿಕ ನಂತರದ ತಿಂಗಳ 20ನೇ ದಿನ
5 ಜಿಎಸ್‍ಟಿಆರ್ -6 ಹೂಡುವಳಿ ಸೇವೆ ಹಂಚಿಕೆದಾರನಿಗಾಗಿ ರಿಟರ್ನ್ ಮಾಸಿಕ ನಂತರದ ತಿಂಗಳ 13ನೇ ದಿನ
6 ಜಿಎಸ್‍ಟಿಆರ್ -7 ಮೂಲದಲ್ಲಿ ತೆರಿಗೆಯನ್ನು ಮುರುಗಡೆ ಮಾಡುವುದಕ್ಕಾಗಿ ರಿಟರ್ನ್ ಮಾಸಿಕ ನಂತರದ ತಿಂಗಳ 10ನೇ ದಿನ
7 ಜಿಎಸ್‍ಟಿಆರ್ -8 ಮೂಲದಲ್ಲಿ ಸಂಗ್ರಹಿಸಿದ ತೆರಿಗೆಯ ವಿವರ ಪತ್ರ ಮಾಸಿಕ ನಂತರದ ತಿಂಗಳ 10ನೇ ದಿನ
8 ಜಿಎಸ್‍ಟಿಆರ್ -9 ವಾರ್ಷಿಕ ರಿಟರ್ನ್ ವಾರ್ಷಿಕ ಮುಂದಿನ ಹಣಕಾಸು ವರ್ಷದ 31 ನೇ ಡಿಸೆಂಬರ್
9 ಜಿಎಸ್‍ಟಿಆರ್ -9ಎ ವಾರ್ಷಿಕ ರಿಟರ್ನ್ (ರಾಜೀ ತೆರಿಗೆದಾರರಿಗೆ ) ವಾರ್ಷಿಕ ಮುಂದಿನ ಹಣಕಾಸು ವರ್ಷದ 31 ನೇ ಡಿಸೆಂಬರ್
10 ಜಿಎಸ್‍ಟಿಆರ್ -9ಸಿ ಲೆಕ್ಕಪರಿಶೋಧನೆ ಪ್ರಮಾಣಪತ್ರ ನಮೂನೆಯೊಂದಿಗೆ ಹೊಂದಾಣಿಕೆ ವಿವರಣೆ ವಾರ್ಷಿಕ ಮುಂದಿನ ಹಣಕಾಸು ವರ್ಷದ 31 ನೇ ಡಿಸೆಂಬರ್
11 ಜಿಎಸ್‍ಟಿಆರ್ -10 ಅಂತಿಮ ರಿಟರ್ನ್ ನೋಂದಣಿ ರದ್ದುಗೊಂಡಾಗ ಅಥವಾ ನೋಂದಣಿಯನ್ನು ಅಧ್ಯರ್ಪಿಸಿದ ಸಂದರ್ಭದಲ್ಲಿ ರದ್ದು ದಿನಾಂಕ ಅಥವಾ ರದ್ದತಿ ಆದೇಶದ ದಿನಾಂಕದಿಂದ ಮೂರು ತಿಂಗಳೊಳಗೆ, ಇವುಗಳಲ್ಲಿ ಯಾವುದು ನಂತರವೋ ಅದು.
12 ಜಿಎಸ್‍ಟಿಆರ್ -11 ವಿಶಿಷ್ಟ ಗುರುತಿನ ಸಂಖ್ಯೆಯನ್ನು (ಯು.ಐ.ಎನ್) ಹೊಂದಿರುವ ವ್ಯಕ್ತಿಗಳಿಂದ ಮಾಡಲಾದ ಒಳಮುಖ ಪೂರೈಕೆಗಳ ವಿವರ ಪತ್ರ. ಮಾಸಿಕ ಯಾವ ಮಾಸಿಕಕ್ಕೆ ವಿವರ ಪತ್ರವನ್ನು ಸಲ್ಲಿಸಬೇಕೋ, ಅದರ ತದನಂತರದ ತಿಂಗಳ 28 ನೇ ದಿನ
ಕಡ್ಡಾಯ ಸಲ್ಲಿಕೆ
1 ಜಿಎಸ್‍ಟಿಆರ್-7 ಮತ್ತು ಜಿಎಸ್‍ಟಿಆರ್-8 ಹೊರತುಪಡಿಸಿ, ಇತರೇ ಎಲ್ಲ್ಲಾ ರಿಟರ್ನ್ ಗಳನ್ನು ಜಿಎಸ್‍ಟಿ ಅಡಿಯಲ್ಲಿ ರಿಟರ್ನ್ ಸಲ್ಲಿಸುವುದು ಕಡ್ಡಾಯವಾಗಿದೆ. ಯಾವುದೇ ವಹಿವಾಟು ಇಲ್ಲದಿದ್ದರೂ ಸಹ ರಿಟರ್ನ್ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
2 ಜಿಎಸ್‍ಟಿಆರ್-7 ಮತ್ತು ಜಿಎಸ್‍ಟಿಆರ್-8 ಹೊರತುಪಡಿಸಿ, ಇತರೇ ಎಲ್ಲ್ಲಾ ರಿಟರ್ನ್ ಗಳಿಗೆ ಹಿಂದಿನ ತಿಂಗಳ / ತ್ರೈಮಾಸಿಕದ ರಿಟರ್ನ್ಸ್ ಗಳನ್ನು ಸಲ್ಲಿಸದ ಹೊರತು, ತರುವಾಯದ ತಿಂಗಳಿಗೆ / ತ್ರೈಮಾಸಿಕಕ್ಕೆ ರಿಟರ್ನ್ಸ್ ಗಳನ್ನು ಸಲ್ಲಿಸಲು ಸಾಧ್ಯವಿರುವುದಿಲ್ಲ.
3 ಜಿಎಸ್‍ಟಿ ರಿಟರ್ನ್ಸ್ ನ ವಿಳಂಬ ಸಲ್ಲಿಕೆಯು ದಂಡದ ಉಪಬಂಧಗಳು ಅನ್ವಯವಾಗುತ್ತವೆ.
ವಿಳಂಬ ಶುಲ್ಕ ಮತ್ತು ಬಡ್ಡಿ
1 ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ, 2017ರ ಪ್ರಕರಣ - 50 ರನ್ವಯ ಬಡ್ಡಿ ಮಾಸಿಕ ಶೇ. 1.5%ರ ದರದಲ್ಲಿ ( ಶೇ. 18% ವಾರ್ಷಿಕ). ನಿಯಮಾನುಸಾರ ರಿಟರ್ನ್ ಅನ್ನು ಸಲ್ಲಿಸುವ ಗಡುವು ದಿನಾಂಕ ಮುಗಿದ ಮರುದಿನದಿಂದ ರಿಟರ್ನ್ ಅನ್ನು ಸಲ್ಲಿಸುವ ದಿನಾಂಕದವರೆಗೂ ಬಡ್ಡಿಯನ್ನು ಪಾವತಿಸಬೇಕು.
2 ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ, 2017ರ ಪ್ರಕರಣ - 47 ರನ್ವಯ ಜಿಎಸ್‍ಟಿ ರಿಟರ್ನ್ಸ್ ಗಳಿಗೆ ವಿಳಂಬ ಶುಲ್ಕ:-
ಎ) ವಾರ್ಷಿಕ ರಿಟರ್ನ್ಸ್ ಹೊರತುಪಡಿಸಿ, ಇತರೇ ಎಲ್ಲಾ ರಿಟರ್ನ್ಸ್ ಗಳಿಗೆ ರೂ. ಪ್ರತಿ ದಿನಕ್ಕೆ 200 ರೂ. (ರೂ 100 ಎಸ್ ಜಿಎಸ್‍ಟಿ + ರೂ 100 ಸಿಜಿಎಸ್‍ಟಿ) ಗರಿಷ್ಠ ರೂ. 10,000/-
    (ರೂ. 5,000/- ಎಸ್ ಜಿಎಸ್‍ಟಿ ಮತ್ತು ರೂ. 5,000/- ಸಿಜಿಎಸ್‍ಟಿ)
ಬಿ) ವಾರ್ಷಿಕ ರಿಟರ್ನ್ಸ್: ರೂ. ದಿನಕ್ಕೆ 200 (ರೂ 100 ಎಸ್ ಜಿಎಸ್‍ಟಿ + ರೂ. 100 ಸಿಜಿಎಸ್‍ಟಿ) - ಗರಿಷ್ಠ ವಹಿವಾಟು 0.25% ವರೆಗೆ.
ಹಕ್ಕುತ್ಯಾಗ
ಇದು ಸಾಮಾನ್ಯ ಮಾಹಿತಿಗಾಗಿ ಮತ್ತು ರಿಟರ್ನ್ಸ್ ಅನ್ನು ಸಲ್ಲಿಸುವ ದಿನಾಂಕಗಳಿಗೆ , ವಿಳಂಬ ಶುಲ್ಕ ಮತ್ತು ದಂಡ ಪಾವತಿಗೆ ಯಾವುದೇ ಬದಲಾವಣೆಗಳು, ಕಾಲಕಾಲಕ್ಕೆ ಸರ್ಕಾರದಿಂದ ನೀಡುವ ಅಧಿಸೂಚನೆ / ಸುತ್ತೋಲೆಗಳಿಗೆ ಒಳಪಟ್ಟಿರುತ್ತವೆ.