ಜಿ.ಎಸ್.ಟಿ ಅಡಿಯಲ್ಲಿ ಟಿಡಿಎಸ್ (ಮೂಲದಲ್ಲಿ ತೆರಿಗೆ ಕಡಿತ)

ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ, 2017 ರ, ಪ್ರಕರಣ 51ರ ಉಪಬಂಧಗಳಿಗೆ ಅನುಸಾರವಾಗಿ ತೆರಿಗೆಯನ್ನು ಮುರುಗಡೆ ಮಾಡವುದು ಅಗತ್ಯವಿರುವ ಯಾವೊಬ್ಬ ವ್ಯಕ್ತಿಯು ನೋಂದಣಿಯ ಮಂಜೂರಾತಿಗಾಗಿ, ವಿದ್ಯುನ್ಮಾನ ರೀತಿಯಲ್ಲಿ ಯುಕ್ತವಾಗಿ ಸಹಿಮಾಡಿದ ಅಥವಾ ವಿದ್ಯುನ್ಮಾನ ಪರಿಶೀಲನೆಯ ಕೋಡ್ ಮುಖಾಂತರ ಪರಿಶೀಲಿಸಲಾದ, ನಮೂನೆ ಜಿಎಸ್‍ಟಿ ಆರ್‍ಇಜಿ-07ರಲ್ಲಿ ಒಂದು ಅರ್ಜಿಯನ್ನು ಸಾಮಾನ್ಯ ಪೋರ್ಟಲ್‍ನಲ್ಲಿ ಸಲ್ಲಿಸತಕ್ಕದ್ದು. ಮೂಲದಲ್ಲಿ ತೆರಿಗೆಯನ್ನು ಮುರುಗಡೆ ಮಾಡುವ ಮುರುಗಡೆದಾರರು ತಮ್ಮ ಕರಾರು ಮೌಲ್ಯ 2,50,000/- ಕ್ಕೂ ಮೀರಿದ ಪಕ್ಷದಲ್ಲಿ ನಿಗಧಿತ ದರದಲ್ಲಿ ತೆರಿಗೆಯನ್ನು ಮುರುಗಡೆ ಮಾಡಲು ಅಧಿಕಾರಯುಕ್ತರಾಗಿರುತ್ತಾರೆ. ಹಾಗೆ ಮುರುಗಡೆ ಮಾಡಿದ ತೆರಿಗೆಯನ್ನು ನಿಗಧಿತ ಕಾಲಮಿತಿಯೊಳಗೆ ಸರ್ಕಾರಕ್ಕೆ ನಮೂನೆ ಜಿಎಸ್‍ಟಿಆರ್‍-7 ರಿರ್ಟನ್‍ನೊಂದಿಗೆ ಸಂದಾಯ ಮಾಡತಕ್ಕದ್ದು.

ಮತ್ತೊಂದು ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಮೇಲೆ ಹೇಳಿದ ಜಿಎಸ್‍ಟಿ ತೆರಿಗೆ ಮುರುಗಡೆಯನ್ನು ಆದಾಯ ತೆರಿಗೆ ಅಡಿಯಲ್ಲಿನ ತೆರಿಗೆ ಕಡಿತ ಎರಡೂ ಒಂದೇ ಎಂದು ಭಾವಿಸತಕ್ಕದ್ದಲ್ಲ.

ಜಿ.ಎಸ್.ಟಿ ಅಡಿಯಲ್ಲಿ ಟಿಡಿಎಸ್ 1ನೇ ಅಕ್ಟೋಬರ್ 2018 ರಿಂದ ಕಾರ್ಯಗತಗೊಳ್ಳುತ್ತದೆ.
ಜಿ.ಎಸ್.ಟಿ ಅಡಿಯಲ್ಲಿ ಟಿಡಿಎಸ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.